ಡ್ರಗ್ಸ್ ಸ್ಮಗ್ಲಿಂಗ್, ಬಾಕ್ಸರ್ ವಿಜೇಂದರ್‌ ಸಿಂಗ್‌ ಮೇಲೆ ಆರೋಪ

2:18 PM, Friday, March 8th, 2013
Share
1 Star2 Stars3 Stars4 Stars5 Stars
(No Ratings Yet)
Loading...

Vijendar Singಮೊಹಾಲಿ : ಡ್ರಗ್ಸ್ ಸ್ಮಗ್ಲಿಂಗ್ ಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ನ ಪದಕ ವಿಜೇತ  ಬಾಕ್ಸರ್‌ ವಿಜೇಂದರ್‌ ಸಿಂಗ್‌ ರವರ ಮೇಲೆ ಆರೋಪ ಕೇಳಿ ಬಂದಿದೆ.

ಮೊಹಾಲಿಯ ಫ್ಲಾಟ್‌ ಒಂದರಲ್ಲಿ 130 ಕೋಟಿ ರೂಪಾಯಿ ಮೌಲ್ಯದ 26 ಕಿಲೋ ಹೆರಾಯಿನ್‌ ನನ್ನು ವಶಪಡಿಸಿಕೊಂಡ ಪಂಜಾಬ್ ಪೊಲೀಸರು ಈ ವೇಳೆ ಅನೂಪ್‌ ಖಲೋನ್‌ ಎಂಬಾತನನ್ನು ಸೆರೆಹಿಡಿದಿದ್ದಾರೆ. ವಿಚಾರಣೆಯ ವೇಳೆ ಈತ ತನಗೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಜತೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ವಿಜೇಂದರ್‌ ಕುಮಾರ್‌ಗೆ ಸಣ್ಣ ಪ್ರಮಾಣದ ಹೆರಾಯಿನ್‌ ಪೂರೈಸುತ್ತಾ ಬಂದಿರವುದಾಗಿಯೂ ಈತ ಹೇಳಿದ್ದಾನೆ.

ಈ ಬಗ್ಗೆ ಪೋಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದರೆ,  ವಿಜೇಂದರ್ ಸಿಂಗ್ ಅವರು ತನಗೂ ಡ್ರಗ್ಸ್ ಸ್ಮಗ್ಲರ್ ಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English