ಮನಪಾ ಮೇಯರ್‌ ಆಗಿ ಮಹಾಬಲ ಮಾರ್ಲ

Thursday, March 13th, 2014
Mahabala-Morley

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 25ನೇ ಮೇಯರ್‌ ಆಗಿ ಕಾಂಗ್ರೆಸ್‌ ಸದಸ್ಯ ಮಹಾಬಲ ಮಾರ್ಲ ಅವರು ಮಾ. 13ರಂದು  ಆಯ್ಕೆಯಾಗಿದ್ದಾರೆ. ಕವಿತಾ ಅವರು ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ  ಚುನಾವಣೆಯಲ್ಲಿ  ಬಿಜೆಪಿಯಿಂದ ಸ್ಪರ್ಧಿಸಿದ ತಿಲಕ್‌ರಾಜ್‌ ಅವರು 20 ಮತಗಳನ್ನು ಪಡೆದರೆ ಮಾರ್ಲ ಅವರು 37 ಮತಗಳನ್ನು ಪಡೆದು ಜಯಶಾಲಿಯಾದರು. ಮಹಾಬಲ ಮಾರ್ಲ  ಅವರು ಕದ್ರಿ ಪದವು ವಾರ್ಡ್‌ನಿಂದ ಮೂರು ಬಾರಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರು ಪ್ರಾದೇಶಿಕ ಆಯುಕ್ತರು ಚುನಾವಣೆ […]

ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ದ.ಕ. ಜಿಲ್ಲಾ ದೃಶ್ಯ ಮಾಧ್ಯಮ ಪತ್ರಕರ್ತರ ಸಂಘದಿಂದ ಫ್ರತಿಭಟನೆ

Wednesday, March 12th, 2014
ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ದ.ಕ. ಜಿಲ್ಲಾ ದೃಶ್ಯ ಮಾಧ್ಯಮ ಪತ್ರಕರ್ತರ ಸಂಘದಿಂದ ಫ್ರತಿಭಟನೆ

ಮಂಗಳೂರು: ದೃಶ್ಯ ಮಾಧ್ಯಮ ಪತ್ರಕರ್ತರ ಸಂಘ ಮಂಗಳೂರು ಇವರ ವತಿಯಿಂದ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಸುಳ್ಳು ಕೇಸು ದಾಖಲಿಸಿ ಅಮಾನವೀಯವಾಗಿ ವರ್ತಿಸಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡು ಸಂಪುಟದಿಂದ ವಜಾಗೊಳಿಸಲು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಬುಧವಾರ ಪ್ರತಿಭಟನೆ ನಡೆಯಿತು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ದೇಶದ್ಯಾಂತ ರಹಸ್ಯ ಕಾಯರ್ಾಚರಣೆಯ ಮೂಲಕ ಸಾಕಷ್ಟು ಭ್ರಷ್ಟಾಚಾರ ಮತ್ತು ದೇಶದಲ್ಲಿ ನಡೆಯುವ ಇತರೆ ಹಗರಣವನ್ನು ಬಯಲಿಗೆಳೆದಿರುವ ಸಾಕಷ್ಟು […]

ಉಡುಪಿ:27 ಕೇಂದ್ರಗಳಲ್ಲಿ -15,680 ವಿದ್ಯಾರ್ಥಿಗಳು ಪಿ.ಯು.ಸಿ. ಪರೀಕ್ಷೆ

Wednesday, March 12th, 2014
II-PUC

ಮಂಗಳೂರು/ಉಡುಪಿ : ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮಾ.12ರಿಂದ 27ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.25ರವರೆಗೆ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ 34,185 ಮತ್ತು ಉಡುಪಿ ಜಿಲ್ಲೆಯಲ್ಲಿ 15,680 ವಿದ್ಯಾರ್ಥಿಗಳು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ದ.ಕ. ಜಿಲ್ಲೆಯಲ್ಲಿ ಒಟ್ಟು 49 ಪರೀûಾ ಕೇಂದ್ರಗಳಿದ್ದು, 183 ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಲ್ಲಿ 30617 ಫ್ರೆಶ್‌, 1200 ರಿಪೀಟರ್, 2468 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿನಿಯರ ಸಂಖ್ಯೆ 17502 ಆಗಿದ್ದು, ವಿದ್ಯಾರ್ಥಿಗಳ ಸಂಖ್ಯೆ […]

ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಪೆರ್ನೆಯಲ್ಲಿ ಉಚಿತ ದಂತ ವೈದ್ಯಕೀಯ ಶಿಬಿರ

Wednesday, March 12th, 2014
Yenapoya

ಬಂಟ್ವಾಳ: ಎಸ್.ಕೆ.ಎಸ್.ಎಸ್.ಎಫ್  ಪೆರ್ನೆ ಶಾಖಾ ವತಿಯಿಂದ ಯೆನಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ದಂತ ವೈದ್ಯಕೀಯ ಶಿಬಿರವು ಇತ್ತೀಚೆಗೆ ಪೆರ್ನೆ ಶಾಲೆಯಲ್ಲಿ ಹಾಜಿ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನೆಡೆಯಿತು. ಸಭೆಯನ್ನು ಝಕರಿಯಾ ದಾರಿಮಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಡಾ| ರಾಜಗೋಪಾ ಶರ್ಮ ಮಾತನಾಡಿ ದೇಶವನ್ನು ಸೈನಿಕರು ಹೇಗೆ ರಕ್ಷಿಸುತ್ತಾರೆ ಅದೇ ರೀತಿ ದೇಹವನ್ನು ದಂತಗಳು ರಕ್ಷಿಸುತ್ತದೆ. ಇಂತಹ ಕಾರ್ಯಕ್ರಮವನ್ನು ಕೈಗೊಂಡ ಎಸ್ ಕೆ ಎಸ್ ಎಸ್ ಎಫ್ ನ ಕಾರ್ಯಕ್ರಮವನ್ನು ಶ್ಲಾಘನೀಯ ಎಂದು ನುಡಿದರು. ಕೃಷ್ಣ […]

ಕಿಡ್ನಿಗಳ ವೈಪಲ್ಯದಿಂದ ನರಳುತ್ತಿರುವ 8 ವರ್ಷದ ಬಾಲಕನಿಗೆ ಸಹಾಯಮಾಡಿ

Wednesday, March 12th, 2014
Rashan

ಮಂಗಳೂರುಃ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಕೊಡಿಯಾಲದಲ್ಲಿ ವಾಸವಾಗಿರುವ ಪುರುಷೋತ್ತಮ ಹಾಗೂ ಭವ್ಯಶ್ರೀ ದಂಪತಿಯ ಮಗನಾದ 8 ವರುಷ ಪ್ರಾಯದ ರೋಶನ್ ಎರಡೂ ಕಿಡ್ನಿಗಳು ವಿಫಲವಾಗಿದೆ. ಊರಿನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿ ಆಗಲಿಲ್ಲ. ಇದೀಗ ಫಾದರ್ಮುಲ್ಲಾರ್ ಆಸ್ಪತ್ರೆ ಕಂಕನಾಡಿ- ಮಂಗಳೂರು ಇಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎರಡೂ ಕಿಡ್ನಿಗಳ ಕಸಿಗಾಗಿ ಸುಮಾರು 6 ಲಕ್ಷ ರೂ. ವೆಚ್ಚವಾಗಲಿದೆ. ಇದಲ್ಲದೇ ಡಯಾಲಿಸಿಸ್ಗಾಗಿ ಮಾಸಿಕ 25 ಸಾವಿರ ರೂ. ವೆಚ್ಚವಾಗಲಿದೆ ಮತ್ತು ವಾರಕ್ಕೆ ಮೂರು […]

ಮಂಗಳೂರು ಮತ್ತೆ ಗುಂಡಿನ ದಾಳಿ

Monday, March 10th, 2014
Fire-Again

ಮಂಗಳೂರು: ಇಲ್ಲಿನ ಬಿಜೈ ನ್ಯೂ ರೋಡ್‌ನ‌ಲ್ಲಿರುವ ಭಾರತಿ ಡೆವಲಪರ್ಸ್ ಕಚೇರಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿರುವ ಘಟನೆ ಸೋಮವಾರ ವರದಿಯಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ಕಚೇರಿಯೊಳಗೆ ನುಗ್ಗಿ ನೆಲದ ಮೇಲೆ ಗುಂಡಿ ಹಾರಿಸಿ ಪರಾರಿಯಾಗಿದ್ದಾರೆ ಎಂದು ಸಂಸ್ಥೆಯ ‌ಮಾಲಕ ಲೊಕನಾಥ ಶೆಟ್ಟಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದಾಳಿಯ ವೇಳೆ ಮಾಲಕರು ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್‌ ಆಯುಕ್ತ ಹಿತೇಂದ್ರ ಭೇಟಿ […]

ಪೂಜಾರಿಗೆ ಒಲಿದ ಮತದೇವರು!

Monday, March 10th, 2014
Janardhan-Poojary

ಮಂಗಳೂರು: ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಗೆಲವು ಸಾಧಿಸಿದ್ದು, ಮಂಗಳೂರು ಲೋಕಸಭೆ ಕ್ಷೇತ್ರದಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಭಾನುವಾರ ನಡೆದ ಆಂತರಿಕ ಚುನಾವಣೆಯಲ್ಲಿ 598 ಮತಗಳ ಪೈಕಿ 547 ಮತಗಳು ಚಲಾವಣೆಯಾಗಿದ್ದು, 7 ಮತಗಳು ಅಸಿಂಧುಗೊಂಡಿವೆ. ಈ ಪೈಕಿ ಜನಾರ್ದನ ಪೂಜಾರಿ 478 ಮತ ಪಡೆದರೆ, ಕಣಚೂರು ಮೋನು 62 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. 10 ನಿಮಿಷ ತಡವಾಗಿ ಬಂದ ಶಾಸಕ ಮೊಯಿನುದ್ದೀನ್ ಬಾವಾಗೆ ಮತ ಹಾಕುವ ಅವಕಾಶ ನೀಡಲಿಲ್ಲ. […]

ಇಂದು ಮಹಿಳಾ ದಿನಾಚರಣೆಗೆ ಮೋದಿ ಜತೆ ಚಾಯ್ ಪೆ ಚರ್ಚಾ

Saturday, March 8th, 2014
Narendra-Modi

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆ ಸಂದರ್ಭ ಮಾ.8ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ 2ನೇ ಸುತ್ತಿನ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಏರ್ಪಡಲಿದೆ. ಸಂಜೆ 4ರಿಂದ 6.30ರ ವರೆಗೆ ಏಕಕಾಲದಲ್ಲಿ ಚಹಾದೊಂದಿಗೆ ಚರ್ಚೆ ನಡೆಯಲಿದೆ. ರಾಜ್ಯದ 110 ಕೇಂದ್ರಗಳಲ್ಲಿ, ದೇಶಾದ್ಯಂತ ಒಟ್ಟು 1500 ಸ್ಥಳಗಳಲ್ಲಿ ಈ ಸಂವಾದ ನಡೆಯಲಿದೆ. ಶೇ.50 ಚರ್ಚೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಈ ಬಾರಿಯ ವಿಶೇಷ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ […]

ಇಂದು ಸಿಗಡಿ ವೈರಸ್ ಪತ್ತೆಹಚ್ಚುವ ಡಯಾಗ್ನಾಸ್ಟಿಕ್ ಕಿಟ್ ಬಿಡುಗಡೆ

Saturday, March 8th, 2014
MNC-Fish

ಮಂಗಳೂರು: ಮಂಗಳೂರು ಮೀನುಗಾರಿಕೆ ಕಾಲೇಜು ಹೈಬ್ರಿಡೋಮಾ ಟೆಕ್ನಾಲಜಿ ಬಳಸಿ ಅಭಿವೃದ್ಧಿಪಡಿಸಿದ ಸಿಗಡಿಯಲ್ಲಿನ ವೈರಸ್ ಪತ್ತೆಹಚ್ಚುವ ಡಯಾಗ್ನಾಸ್ಟಿಕ್ ಕಿಟ್ ಮಾ. 8 ರಂದು ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದಿಲ್ಲಿ ಭಾರತ ಕೃಷಿ ಅನುಸಂದಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್ ಅವರು ಡಯಾಗ್ನಾಸ್ಟಿಕ್ ಕಿಟ್‌ನ್ನು ಮುಂಬೈನ ಫ್ರಾನ್ಸ್ ಅಂತಾರಾಷ್ಟ್ರೀಯ ವಿರ್ಬ್ಯಾಕ್ ಸಂಸ್ಥೆಗೆ ಹಸ್ತಾಂತರಿಸುವರು ಎಂದು ಮೀನುಗಾರಿಕೆ ಕಾಲೇಜಿನ ಡೀನ್ ಡಾ.ಕೆ.ಎಂ. ಶಂಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಕಿಟ್‌ನಿಂದ ರೈತರು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸಿಗಡಿಯಲ್ಲಿರುವ ಬಿಳಿಚುಕ್ಕೆ […]

ಮಧ್ಯಾಹ್ನದ ಬಿಸಿಯೂಟ ಸೇವಿಸಿ 17 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

Friday, March 7th, 2014
Children

ಮಂಗಳೂರು: ನಗರದ ಹೊರವಲಯದ ಮುಡಿಪು ಬಳಿಯ ಕಿನ್ಯದ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 17 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಮಾರ್ಚ್‌ 7 ರಂದು ನಡೆದಿದೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 17 ಮಂದಿ ವಿದ್ಯಾರ್ಥಿಗಳಲ್ಲಿ 8 ಮಂದಿ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳು ತೀವ್ರ ವಾಂತಿ ಹಾಗೂ ಬೇಧಿಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ಶಾಲಾ ಶಿಕ್ಷಕರು  ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಮಕ್ಕಳ ನಿಗಾ […]