ಮಂಗಳೂರು : ಆರ್. ಎಂ. ಗ್ರೂಪ್ ನವರು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಏರ್ಪಡಿಸುತ್ತಿರುವ ಸಾಮೂಹಿಕ ವಿವಾಹದ ಸಿದ್ಧತೆಯ ಕುರಿತಾಗಿ ಮಂಗಳೂರಿನ ಓಶಿಯನ್ ಪರ್ಲ್ ಹೋಟೇಲ್ ನಲ್ಲಿ ಪತ್ರಿಕಾಗೋಷ್ಠಿ ಇಂದು ಮಧ್ಯಾಹ್ನ ನಡೆಯಿತು.
ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕರವರು ಚೆಯರ್ ಮೆನ್ ಆಗಿರುವ ಆರ್.ಎಂ. ಗ್ರೂಫ್ ಆಫ್ ಕಂಪೆನಿಯು ಬೆಳ್ಳಾರೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 07/08/2010 ರಂದು ಏರ್ಪಡಿಸಿದ್ದು, ಸರ್ವ ಧರ್ಮ ಸೌಹಾರ್ಧತೆಯ ದೃಷ್ಠಿಯಿಂದ ಮೂರು ಧರ್ಮದ ಧಾರ್ಮಿಕ ಮುಖಂಡರು ವಧುವರರನ್ನು ಆಶೀರ್ವದಿಸಲಿದ್ದಾರೆ.
ಬೆಳ್ಳಾರೆಯಲ್ಲಿ ಆರ್. ಎಂ. ಗ್ರೂಫ್ ಆಫ್ ಕಂಪೆನಿಯ ಸುಸಚ್ಚಿತ ಸಭಾ ಭವನದ ಶಿಲಾನ್ಯಾಸವನ್ನು ಅದೇ ದಿನ ಗೃಹ ಸಚಿವ ವಿ.ಎಸ್. ಆಚಾರ್ಯ ನೆರವೇರಿಸಲಿದ್ದು, ಸರ್ವ ಧರ್ಮ ವಿವಾಹದ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಮುಳ್ಳಪಲ್ಲಿ ರಾಮಚಂದ್ರನ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ವಹಿಸಲಿದ್ದಾರೆ.
ವಧುವರರಿಗೆ ಚಿನ್ನಾ ಆಭರಣವನ್ನು ನೀಡುವ ಕಾರ್ಯಕ್ರಮವನ್ನು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ನೆರವೇರಿಸಲಿದ್ದು, ಸಹಾಯ ಧನ ವಿತರಣೆಯನ್ನು ಕರ್ನಾಟಕದ ವಿಧಾನ ಪರಿಷತ್ತಿನ ಉಪಸಭಾಪತಿ ಪುಟ್ಟಣ್ಣ ನಿರ್ವಹಿಸಲಿದ್ದಾರೆ.
ಆರ್. ಎಂ. ಗ್ರೂಪ್ ಆಫ್ ಚಾರಿಟೇಬಲ್ ನ ಕಟ್ಟಡಕ್ಕೆ ಖ್ಯಾತ ವಾಘ್ಮಿಯು ರಾಜ್ಯ ಸಭಾ ಸದಸ್ಯರು ಆದ ಅಬ್ದುಸಮದ್ ಸಮದಾನಿ ಶಿಲಾನ್ಯಾಸ ನೆರವೇರಿಸಲದ್ದಾರೆ.
ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್, ಕನರ್ಾಟಕ ಸರಕಾರದ ದೆಹಲಿ ಪ್ರತಿನಿಧಿ ಧನಂಜಯ ಕುಮಾರ್, ನಾಗರಾಜ್ ಶೆಟ್ಟಿ, ಡಿ.ಜಿ.ಪಿ. ಜೀಜಾ ಎಂ. ಹರಿಸಿಂಗ್, ಕುಸ್ರೋ, ಖರೇಷಿ, ಯೆನಪೋಯ ಅಬ್ದುಲ್ ಕುಂಞ, ಐ.ಜಿ.ಪಿ ಗೋಪಾಲ್ ಹೊಸೂರು, ಕಮಿಷನರೇಟ್ ಸೀಮಂತ್ ಕುಮಾರ್ ಸಿಂಗ್, ಜಿಲ್ಲೆಯ ಶಾಸಕರು, ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಸುಮಾರ್ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಜನರು ಭಗವಹಿಸಲಿದ್ದು, ಎಲ್ಲರಿಗೂ ಬೋಜನ ಏರ್ಪಡಿಸಲಾಗಿದೆ. ಜೋಡಿ ಓಂದಕ್ಕೆ ಬಟ್ಟೆ ಬರೆಗೆ 26,000 ರೂಪಾಯಿ, 8 ಪವನ್ ಚಿನ್ನ ಹಾಗೂ ಎಲ್ಲಾ ಖರ್ಚುವೆಚ್ಚವನ್ನು ಆರ್. ಎಂ. ಗ್ರೂಫ್ ಆಫ್ ಕಂಪೆನಿ ವಹಿಸಿರುತ್ತದೆ. ಎಂದು ಅಮ್ಚನಡ್ಕ ಅಬ್ದುಲ್ ಖಾದರ್ ಹಾಜಿ ತಿಳಿಸಿದರು.
ಅಬ್ದುಲ್ ಖಾದರ್, ಮಹಮದ್ ಆಲಿ, ಜಿ.ಎಂ. ಇಜಿಲಾ, ಟಿ.ಎಂ. ಶಾಹೀದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.