ಮಂಗಳೂರು : 14ನೇ ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್ ಕುರಿತು ಇಂದು ಬೆಳಗ್ಗೆ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ||ಜೆಸ್ಸಿ ಮರಿಯಾ ಡಿ ಸೋಜಾ, ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾದ ಶರಣ್ಯ ಮಹೇಶ್ ಜುಲೈ 19 ರಿಂದ 25 ರವರೆಗೆ ಚೈನೀಸ್ ತೈಪೇ ಯಲ್ಲಿ ನಡೆದ 14ನೇ ಏಷಿಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧಾಕೂಟದಲ್ಲಿ 15 ಕ್ಕಿಂತಲೂ ಹೆಚ್ಚು ದೇಶಗಳು ಭಾಗವಹಿಸಿದ್ದವು. ಮಹಿಳೆಯರ 17ರ ಮೇಲಿನ ವಯೋಮಿತಿಯ ರಿಲೇ ಸ್ಪರ್ಧೆಯಲ್ಲಿ 2 ಕಂಚಿನ ಪದಕವನ್ನು ಶರಣ್ಯ ಗೆದ್ದುಕೊಂಡಿದ್ದಾರೆ. ಶರಣ್ಯ ಮಹೇಶ್ ರವರು ಈವರೆಗೆ ಹಲವಾರು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹೆಚ್ಚಿನ ಸ್ಪರ್ಧಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದು, ರಾಜ್ಯ ಮಟ್ಟದ ಚಾಂಪಿಯನ್ ಹಾಗೂ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ವಿಜೇತರಾಗಿದ್ದಾರೆ. ಎಂದು ಅವರು ತಿಳಿಸಿದರು.
ಶರಣ್ಯ ಮಹೇಶ್ ಮಂಗಳೂರಿನ ರೋಲರ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರರಾದ ಮಹೇಶ್ ಕುಮಾರ್ ಹಾಗೂ ಸೋನಿಯಾರವರ ಸುಪುತ್ರಿಯಾಗಿದ್ದು, ನಗರದ ಸೈಂಟ್ ಅಲೋಷಿಯಸ್ ಕಾಲೇಜ್ ನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ತರಬೇತುದಾರ ಮಹೇಶ್ ಕಮಾರ್, ಲಿಸ್ಟರ್ ಡಿ ಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.