ಮಂಗಳೂರು: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಂಗಳೂರು ಇಲ್ಲಿ ಕೈಗಾರಿಕಾಭಿವೃದ್ಧಿ ಮತ್ತು ಕೃಷಿ ಈ ಕುರಿತು ಇಂದು ಸಂಜೆ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಪಾಲ್ಗೊಂಡ ಸಂಸದ ನಳಿನ್ ಕುಮಾರ್ ಮಾತನಾಡಿ ನಾನು ಅಭಿವೃದ್ಧಿಯ ವಿರೋದಿಯಲ್ಲ, ಅಭಿವೃದ್ಧಿಯ ಹೆಸರಿನಲ್ಲಿ ಆಕ್ರಮ ಮಾಡುವುದನ್ನು ಸಹಿಸಲಾರೆ. ಸಣ್ಣ ಉದ್ದಿಮೆಗಳು ನಾಶವಾಗಬಾರದು ಅದರೊಂದಿಗೆ ಎಲ್ಲರಿಗೂ ಬದುಕಲು ಸಮಾನವಾದ ಹಕ್ಕನ್ನು ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ನಮ್ಮಲ್ಲಿ ಉದ್ದಿಮೆಗಳು ಬರಬೇಕು ಆದರೆ ಪ್ರಕೃತಿಯನ್ನು ನಾಶ ಮಾಡಿ ನಮಗೆ ಉದ್ದಿಮೆ ಬೇಡ. ಎಸ್ಈಝೆಡ್ ಈಗ ಉದ್ಯೋಗದ ಆಶೆಯನ್ನು ಮೂಡಿಸಿದೆ. ನಮ್ಮ ಜನರಿಗೆ ಎಷ್ಟು ಉದ್ಯೋಗ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಸರಕಾರದ ಒಪ್ಪಂದದ ಪ್ರಕಾರ 1800 ಎಕ್ರೆ ಸ್ಥಳವನ್ನು ಈಗಾಗಲೇ ನಿಡಲಾಗಿದೆ. ಅದಕ್ಕಿಂತ ಹೆಚ್ಚು ಅತಿಕ್ರಮಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಸಂವಾದದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಕಾಮತ್, ಲತಾಕಿಣಿ, ಮೋಹನದಾಸ ಪ್ರಭು, ವಂದ್ರಕಾಂತ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.