ಮಂಗಳೂರು, ಜೂ.30: ದುಷ್ಚಟಗಳನ್ನು ತ್ಯಜಿಸಿ, ಹೆಚ್ಚು ಹೆಚ್ಚು ಮಂದಿ ಸದಸ್ಯತನವನ್ನು ಹೊಂದಿ ಸಂಘಟನೆಯಲ್ಲಿ ಭಾಗವಹಿಸಿ ಸಂಘಟನೆಯನ್ನು ಬಲವರ್ಧನೆಗೊಳಿಸಬೇಕೆಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ದಿನೇಶ ಎಲ್ ಬಂಗೇರ ಕರೆಕೊಟ್ಟರು.
ಸವಿತಾ ಸಮಾಜ ಸುರತ್ಕಲ್ ವಲಯ ಸಮಿತಿ ವತಿಯಿಂದ ಸಮಾಜದ ಹಿರಿಯರಾದ ನಿವೃತ್ತ ಶಿಕ್ಷಕಿ ಕಮಲಾ ಭಂಡಾರಿ ಕೃಷ್ಣಾಪುರ, ಹಿರಿಯ ಕುಲಕಸುಬುದಾರರು ರುಕ್ಕಯ್ಯ ಸಾಲ್ಯಾನ್ ಕೃಷ್ಣಾಪುರ, ಪ್ರಶಸ್ತಿ ವಿಜೇತ ಕೃಷಿಕ ನಾರಾಯಣ ಭಂಡಾರಿ ಕುಳಾಯಿ, ಮತ್ತು ನಿವೃತ್ತ ಎಂ.ಸಿ.ಎಫ್. ಉದ್ಯೋಗಿ ಬಿ.ರಾಘವ ಸುವರ್ಣ ಸುರತ್ಕಲ್ ರನ್ನು ಜೂ. 29 ರಂದು ಕುಳಾಯಿ ಮಹಿಳಾ ಮಂಡಲಾದ ಸಭಾಂಗಣದಲ್ಲಿ ಗೌರವಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಕುಳಾಯಿ ವಿಠಲ ಭಂಡಾರಿ ಸ್ಮಾರಕ ಕ್ಷೇಮ ನಿಧಿಯ ಉದ್ಘಾಟನೆ, ಸದಸ್ಯತನದ ಗುರುತು ಚೀಟಿ ವಿತರಣೆ, ವಿದ್ಯಾಥರ್ಿಗಳಿಗೆ ಪ್ರೋತ್ಸಾಹಧನ ವಿತರಣೆಯು ಜರುಗಿತು.
ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಕೃಷ್ಣ ಕುಮಾರ್ ವಹಿಸಿದ್ದು ಜಿಲ್ಲಾ ಸಮಿತಿಯ ಕಾಯರ್ಾಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ, ಮಂಗಳೂರು ತಾಲೂಕು ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಜಿಲ್ಲಾ ಪ್ರತಿನಿಧಿ ರವೀಂದ್ರ ಭಂಡಾರಿ, ಕೃಷ್ಣಾಪುರ, ತಾಲೂಕು ಕಾರ್ಯದಶರ್ಿ ವಿನೀತ್ ಸುವರ್ಣ, ತಾಲೂಕು ಕೋಶಾಧಿಕಾರಿ ಗುರುವಪ್ಪ ಸಾಲ್ಯಾನ್ ಪಣಂಬೂರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಡಿ. ಸೋಮಪ್ಪ, ಅಭಿವೃದ್ದಿ ಅದಿಕಾರಿ ಡಿ.ಡಿ. ನಾಕ್ ಮತ್ತು ಶ್ರೀಮತಿ ಭವಾನಿ ವಿಠಲ ಭಂಡಾರಿ, ರವಿರಾಜ್ ಭಂಡಾರಿ ಕುಳಾಯಿ, ಬ್ಯೂಟಿ ಪ್ಲಾನೆಟ್ನ ಜಗದೀಶ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಶಾಂತ್ ಜನತಾಕಾಲನಿ ಇವರು ಪ್ರಾರ್ಥನೆ ಗೀತೆ ಹಾಡಿ, ನಟೇಶ ಭಂಡಾರಿ ಸ್ವಾಗತ ಭಾಷಣ ಮಾಡಿದರು. ರಾಜೇಶ ಬೈಕಂಪಾಡಿ ಯವರು ವಂದನಾರ್ಪಣೆ ಗೈದರು.