ಮಂಗಳೂರು: ಏನ್ ಡಿ ಸಿ, ಸಿಐಡಿ ಮಾದಕ ದ್ರವ್ಯ ಪತ್ತೆ ದಳದ ಇನ್ಸ್ ಫಕ್ಟರ್ ಸಿ.ಎ.ಸೈಮನ್ ನೇತೃತ್ವದ ತಂಡ ಇಂದು ಸಂಜೆ ತಲಪಾಡಿ ಸಮೀಪದ ಕೆ.ಸಿ. ರೋಡಿನಿಂದ ನಾಟೆಕಲ್ ಸಂಪರ್ಕಿಸುವ ರಸ್ತೆಯ ಪಲಾಹ್ ಅಂಗ್ಲ ಮಾಧ್ಯಮ ಶಾಲೆಯ ಬಳಿಯಲ್ಲಿ ನಿಲ್ಲಿಸಿದ್ದ ಕೇರಳ ನೋಂದಣಿಯ ಕೆ.ಯಲ್. 14- ಎಚ್ 4915 ಮಾರುತಿ ಎಸ್ಟ್ರಾ ಕಾರಿನಲ್ಲಿ ಹೆರಾಯಿನ ಮಾದಕ ದ್ರವ್ಯದ ಮಾರಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಮಾದಕ ದ್ರವ್ಯ ಪತ್ತೆ ದಳಕ್ಕೆ ಬಂದ ದೂರವಾಣಿ ಕರೆಯ ಮಾಹಿತಿಯಂತೆ ಕಾರ್ಯಚರಣೆ ನಡೆಸಿದಾಗ ನಾಲ್ಕು ಜನ ಆರೋಪಿಗಳು 2 ಕೆ.ಜಿ ಯಷ್ಟು ತೂಕದ ಹೆರಾಯಿನ್ ಹುಡಿಯನ್ನು ಮಾದಕ ವ್ಯಸನಿಗಳಿಂದ ಮತ್ತು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಮಾರಟದಲ್ಲಿ ತೊಡಗಿತ್ತು ಎಂದು ತಿಳಿದು ಬಂದಿದೆ.
ಕಾಸರಗೋಡು ನಿವಾಸಿಗಳಾದ ಹಸೈನಾರ್ 39ವ, ರಫೀಕ್ 31 ವ, ಮನೋಜ್ 42 ವ, ಗಂಗಾಧರ 32 ವ, ಇವರು ಕೆ.ಯಲ್. 14- ಎಚ್ 4915 ಮಾರುತಿ ಎಸ್ಟ್ರಾ ಕಾರಿನಲ್ಲಿ ಹೆರಾಯಿನನ್ನು ಸಾಗಿಸುತ್ತಿದ್ದರು. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕ ದ್ರವ್ಯದ ಬೆಲೆ ಸುಮಾರು ಎರಡು ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಬಂದಿತರಿಂದ ನಾಲ್ಕು ಮೊಬೈಲ್ ಫೋನು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಸ್ಟೇಬಲ್ ಗಳಾದ ವಸಂತ, ಅಶೋಕ, ಕಾನ್ಸ್ಸ್ಟೇಬಲ್ ಗಳಾದ ಹರೀಶ್ ಚಾಲಕರಾದ ನವೀನ್ ಕುಮಾರ್ ಭಾಗವಹಿಸಿದ್ದರು.
ಬಂದಿತರನ್ನು ನಾಳೆ ಬೆಳಿಗ್ಗೆ ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಇನ್ಸ್ ಫಕ್ಟರ್ ಸಿ.ಎ.ಸೈಮನ್ ತಿಳಿಸಿದ್ದಾರೆ.