ಮಂಗಳೂರು : ಪ್ರಗತಿಪರ ಜನಸಮುದಾಯ ಪ್ರಕಾಶನ ಅಧಮ್ಯ ಕ್ರಾಂತಿಕಾರಿ ಭಗತ್ ಸಿಂಗ್ ಎಂಬ ಪುಸ್ತಕದ ಬಿಡುಗಡೆ ಸಮಾರಂಭ ಬುಧವಾರ ಸಂಜೆ 5.15 ಕ್ಕೆ ನಗರದ ಹ್ಯಾಮಿಲ್ಟನ್ ಕಟ್ಟಡದ ವಿಕಾಸದಲ್ಲಿ ನಡೆಯಿತು.
ಖ್ಯಾತ ಚಿಂತಕರು, ಕುಂದಾಪು ಇವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ವಸಂತ ಆಚಾರ್ಯ, ಸಂಪಾದಕರು, ಪ್ರಗತಿಪರ ಜನಸಮುದಾಯ ಮಾಸಿಕ ಇವರು ಅಮರ ಕ್ರಾಂತಿಕಾರಿ ಭಗತ್ ಸಿಂಗ್ ಪುಸ್ತಕ ಪರಿಚಯ ಮಾಡಿಕೊಟ್ಟರು.
ಕೋಮುವಾದ ಸಂಘಟನೆಯಲ್ಲಿ ದಾರಿ ತಪ್ಪಿ ಒಬ್ಬರನೊಬ್ಬರು ಕೊಲ್ಲುವ ಹಂತಕ್ಕೆ ತಲುಪಿದ್ದಾರೆ, ಯುವ ಹೋರಾಟಗಾರರಿಗೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರು ಸ್ಫೂರ್ತಿಯ ಚಿಲುಮೆಯೆಂದು ಡಿ.ವೈ.ಎಫ್.ಐ. ದ.ಕ. ದ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ತಿಳಿಸಿದರು. ಭಗತ್ ಸಿಂಗ್ ರ ತತ್ವ ಡಿ.ವೈ.ಎಫ್.ಐ ಗೆ ಪ್ರೇರಕ ಶಕ್ತಿಯಾಗಿದೆ.
ಯುವಜನರನ್ನು ಬಡಿದೆಬ್ಬಿಸಬೇಕು ವಿವೇಕಾನಂದ, ಭಗತ್ ಸಿಂಗ್ ರವರ ತತ್ವಾದರ್ಶ ಜನರಿಗೆ ಅರ್ಥವಾಗುವಂತೆ ಕೆಲಸಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಯಾದವ್ ಶೆಟ್ಟಿ, ಪ್ರಕಾಶಕರು, ಜನಸಮುದಾಯ ಪ್ರಕಾಶನ, ಅವರು ತಿಳಿಸಿದರು.
ಡಾ|| ಅಶೋಕ್ ದಾವಳೆಯವರ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದಂತಹ ಕೃಷ್ಣಪ್ಪ ಕೊಂಚಾಡಿ, ವಾಸುದೇವ ಉಚ್ಚಿಲ ಕಾರ್ಯದರ್ಶಿ, ಸಮುದಾಯ ಮಂಗಳೂರು ಪಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.