ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಕಡಲು ಕೊರೆತದ ತಡೆಗಟ್ಟಲು ಸರಕಾರ ರೂಪಿಸಿಕೊಂಡ ಯೋಜನೆಗಳ ಬಗ್ಗೆ ಇಂದು ಸಂಜೆ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು.
ಕರಾವಳಿ ಪ್ರದೇಶದಲ್ಲಾಗುವ ಕಡಲುಕೊರೆತದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ 911 ಕೋಟಿ ರೂಪಾಯಿಗಳನ್ನು ಕಡಲ್ಕೊರೆತಕ್ಕೆ ಬಿಡುಗಡೆ ಮಾಡಿದ್ದು, ಕೇಂದ್ರದಿಂದ 85% ಹಾಗೂ ರಾಜ್ಯ ಸರಕಾರದ ವತಿಯಿಂದ 15% ವನ್ನು ನೀಡಲಾಗಿದೆ. ಉಳ್ಳಾಲದಿಂದ ಕಾರವಾರದವರೆಗೂ ಕಡಲ್ಕೊರೆತ ಉಂಟಾಗುತ್ತಿದ್ದು 253ಕೋಟಿ ರೂಪಾಯಿಯನ್ನು ಉಳ್ಳಾಲದ ಕಡಲ್ಕೊರೆತಕ್ಕೆ ಉಪಯೋಗಿಸಲಾಗಿದೆ. 1890 ಮೀಟರ್ ಉದ್ದದ ತಡೆಗೋಡೆ ನಿರ್ಮಿಸ ಬೇಕಾಗಿದ್ದು ಮುಂದಿನ ವರ್ಷದಿಂದ ಕಾರ್ಯರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಜಲ ಮಾಲಿನ್ಯದ ಪ್ರಮಾಣ 50% ಏರಿದೆ, ಮಂಗಳೂರಿನಲ್ಲಿ ಬೆಂಗಳೂರಿನಂತೆ ಜಲಮಾಲಿನ್ಯದ ಪ್ರಮಾಣ ಏರಿಕೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸರಕಾರದಿಂದ ಜಲ ಮಾಲಿನ್ಯ ತಡೆಗೆ ಯಾವುದೇ ರೀತಿಯ ನಿಧಿ ಇಲ್ಲದ ಕಾರಣ ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಪಾಲೇಮಾರ್ ತಿಳಿಸಿದರು.