ಮಂಗಳೂರು : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಣ ಕಾರ್ಮಿಕರ ಫೆಡರೇಶನ್ ವತಿಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಮಂಗಳೂರು ನಗರ ಸಮಾವೇಶ ಇಂದು ಬೆಳಿಗ್ಗೆ ನಗರದ ಎನ್.ಜಿ.ಒ ಹಾಲಿನಲ್ಲಿ ನಡೆಯಿತು.
ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಮಂಗಳೂರು ಇದರ ಅಧ್ಯಕ್ಷರಾದ ಬಿ.ಮಾಧವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಲಕ್ಷಾಂತರ ಕಟ್ಟಡ ಕಾರ್ಮಿಕರಿದ್ದಾರೆ. ಕಟ್ಟಡ ಕಾರ್ಮಿಕರ ಬದುಕು ಉತ್ತಮ ಗೊಳ್ಳಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಮುತುವರ್ಜಿ ವಹಿಸಬೇಕಾಗುತ್ತದೆ. ಅನೇಕ ವರ್ಷಗಳಿಂದ ಕರ್ನಾಟಕದಲ್ಲಿ ಪ್ರಭಲ ಹೋರಾಟ ನಡೆಸಿ 2006 ನವೆಂಬರ್ 1 ರಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಯಿತು. ಇದರಲ್ಲಿ ಹಲವಾರು ಸವಲತ್ತುಗಳಿದ್ದರೂ ಕಾರ್ಮಿಕರಿಗೆ ಸಿಗುವ ಸವಲತ್ತು ಮಾತ್ರ ಅಲ್ಪವಾಗಿದೆ ಎಂದು ಬಿ.ಮಾಧವ ಹೇಳಿದರು.
ಕಾಮರ್ಿಕರ ಸಂಘಟನೆಯನ್ನು ಮಂಗಳೂರಿನಲ್ಲಿ ಬಲಿಷ್ಠಗೊಳಿಸಬೇಕಾಗಿದೆ ಅದಕ್ಕಾಗಿ ರಾಜ್ಯ ಸಲಹಾ ಸಮಿತಿಯ ರಚನೆಯಾಗಬೇಕು, ಕಟ್ಟಡ ಕಾರ್ಮಿಕರಿಗೆ ಪೂರ್ಣ ಸವಲತ್ತು ಸಿಗುವಂತಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಐ.ಟಿಯು ಕಟ್ಟಡ ಸಮಿತಿಯ ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಸಿ.ಐ.ಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಅಧ್ಯಕ್ಷ ವಾಸುದೇವ ಜೆ.ಕೆ, ಡಿ.ವೈ.ಎಫ್.ಐನ ಆಶೋಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.