26.06.10 ಮಂಗಳೂರು : ಇಂಜಿನಿಯರ್ ಲಿಂಗೇಗೌಡರ ಅಧಿಕಾರದಿಂದ ವಜಾಗೊಳಿಸುವುದರ ಬಗ್ಗೆ ಇಂಟರ್ ವತಿಯಿಂದ ಇಂದು ಸಂಜೆ 4.00 ಗಂಟೆಗೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಇಂಜಿನಿಯರ್ ಲಿಂಗೇಗೌಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂಟರ್ ಸಮಿತಿ ವತಿಯಿಂದ ಹಾಗೂ ಸಚಿವರಿಂದ ಹಿಡಿದು ಆಯುಕ್ತರವರೆಗೆ ದೂರು ನೀಡಿದ್ದರೂ ಯಾವುದೇ ತನಿಖೆ ನಡೆದಿಲ್ಲ ಹಾಗೂ ಅವರ ಬಗ್ಗೆ ಕ್ರಮ ಕೈಗೊಂಡಿಲ್ಲ.
ಜನಪ್ರತಿನಿಧಿಗಳು, ಅದರಲ್ಲಿ ಮಹಿಳಾ ಜನಪ್ರತಿನಿಧಿಗಳ ಬೇಡಿಕೆ ಮತ್ತು ಕಾಮಗಾರಿಗಳನ್ನು ನಿರ್ಲಕ್ಷದಿಂದ ನೋಡಿ ಕಾಮಗಾರಿಗಳಿಗೆ ತಡೆಯುಂಟುಮಾಡುವುದು ಜನಪ್ರತಿನಿಧಿಗಳೊಂದಿಗೆ ಉಡಾಫೆಯಿಂದ ಮಾತನಾಡುವುದು, ಕಿರಿಯ ಸಹೋದ್ಯೋಗಿಗಳಿಗೆ ಕಿರುಕುಳ ನೀಡುವುದು, ಮೊದಲಾದವುಗಳನ್ನು ಮಾಡುತ್ತಿದ್ದಾರೆ ಎಂದು ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾರ್ ತಿಳಿಸಿದರು. ಮಂಗಳೂರು ಸರಕರಿ ಕಾಲೇಜುಗಳಿಂದ ಆರ್.ಟಿ.ಒ ಸರ್ಕಲ್ ವರೆಗೆ ಕಾಂಕ್ರೀಟೀಕರಣ ರಸ್ತೆ ಆದರೂ ಬಸ್ಸು ನಿಲ್ದಾಣ ಇಲ್ಲದೇ ಜನಸಾಮಾನ್ಯರು ಮಳೆಗಾಲದಲ್ಲಿ ತೊಂದರೆಗೀಡಾಗುತ್ತಿದ್ದಾರೆ. ಕೇವಲ 9 ತಾಣಗಳ ಬಗ್ಗೆ ಹಲವಾರು ದಿನಗಳಿಂದ ಕಬ್ಬಿಣ ಕಂಬಗಳನ್ನು ಹಾಕಿದ್ದು ಮೇಲ್ಚಾವಣಿ ಹಾಕದಿರುವುದು, ಹಾಗೂ ಸರಕರಿ ಕಾಲೇಜಿನ ಆವರಣ ಗೋಡೆ ಬಿದ್ದು 15 ದಿವಸಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಲಿಂಗೇಗೌಡರ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗುಲ್ಜರ್ಬಾನು, ಶಶಿರಾಜ್ ಅಂಬಟ್, ಮಹಮ್ಮದ್ ಕಂಜತ್ ಬೈಲ್, ಕರುಣಾಕರ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಯಪಸ್ಥಿತರಿದ್ದರು.