ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ದ.ರಾ. ಬೇಂದ್ರೆ ‘ಅನುಸಂದಾನ ಕಾರ್ಯಕ್ರಮ’ ದ ಪತ್ರಿಕಾಗೋಷ್ಠಿಯು ನಿನ್ನೆ ಸಂಜೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲ್ ನಲ್ಲಿ ಜರಗಿತು.
ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಜುಲೈ 24 ರಂದು ಕನ್ನಡದ ವರಕವಿ ದ.ರಾ. ಬೇಂದ್ರೆ ಅನುಸಂಧಾನ ಕಾರ್ಯಕ್ರಮವು ಸರಕಾರಿ ಪ.ಪೂ. ಕಾಲೇಜು ಮತ್ತು ಪ್ರೌಢಾ ಶಾಲಾ ವಿಭಾಗ ರಥ ಬೀದಿ ಮಂಗಳೂರು ಇದರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ಬೆಳಗ್ಗೆ 10 ಗಂಟೆಗೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಪಿ.ಪಿ. ಜೋಸೆಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಸರಕಾರಿ ಕಾಲೇಜು, ಕಾಸರಗೋಡ್ ಇಲ್ಲಿನ ಕನ್ನಡ ವಿಭಾಗದ ಪ್ರೊಫೆಸರ್ ಡಾ| ಯು ಮಹೇಶ್ವರಿ ಉಪನ್ಯಾಸ ನೀಡಲಿದ್ದಾರೆ.
ಬೇಂದ್ರೆ ಕೃತಿಗಳ ಭಾವ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಬೇಂದ್ರೆ ನಮನದ ಅಂಗವಾಗಿ ವಿವಿಧ ಸಂಸ್ಥೆಗಳ ವಿದ್ಯಾಥರ್ಿನಿಯರಿಂದ ಗಾಯನ ಕಾರ್ಯಕ್ರಮವಿದ್ದು ದೇವರಾಜ ಆರ್ಯ ಮತ್ತು ಬಳಗದಿಂದ ಸಂಗೀತವಿರುವುದೆಂದು ಪತ್ರಿಕಾಗೋಷ್ಠಿಯಲ್ಲಿ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಜನಾರ್ಧನ ಹಾಂದಿ, ಪರಮೇಶ್ವರ್, ಜಿ.ಕೆ. ಭಟ್, ಸಿರಾಜ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು