24.06.10 ಮಂಗಳೂರು : ಭಾರತ ಯುವಜನ ಫೆಡರೇಶನ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್ ಹುತಾತ್ಮ ದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣವನ್ನು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಇರುವ ಕಂದಾಯಭವನದಲ್ಲಿ ಇಂದು ಸಂಜೆ ನಡೆಸಲಾಯಿತು.
ಕೈಗಾರಿಕಾ ಉದ್ಯಮಗಳು,ಕಾರ್ಖಾನೆಗಳು ದೇಶದಲ್ಲಿ ಸ್ಥಾಪನೆಯಾಗಿವೆ, ಅನಿಲ ದುರಂತಕ್ಕೆ ಕಾರಣ ಯಾರು? ಎಂದು ಚರ್ಚೆ ನಡೆಯ ಬೇಕಿದೆ ಮಂಗಳೂರಿನಲ್ಲೂ ಈ ಅಪಾಯವಿರುವುದರಿಂದ ಚರ್ಚಾ ಸಮಿತಿಗಳ ಮೂಲಕ ಚಿಂತನೆ ನಡೆಸಬೇಕಿದೆ ಎಂದು ಡಿ,ವೈ.ಎಫೈನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು.
ನಂತರ ಮಾತನಾಡಿದ ಖ್ಯಾತ ವಿಚಾರವಾದಿಯಾದ ಪ್ರೋ. ನರೇಂದ್ರ ನಾಯಕ್ ಭೋಪಾಲ್ ಅನಿಲ ದುರಂತಕ್ಕೆ ಯಾರು ಹೊಣೆ? ಅಂದಿನ ಕಾಂಗ್ರೇಸ್ ಸರಕಾರವೆ? ಅಥವಾ ದೊಡ್ಡ ದೊಡ್ಡ ಕಂಪೆನಿಗಳೇ? ಎಂದು ಪ್ರಶ್ನಿಸಿದರು. ದೇಶವನ್ನು ಬಂಡವಾಳಶಾಹಿಗಳತ್ತ ತೆಗೆದುಕೊಂಡು ಹೋಗಲು ನಡೆಸುತ್ತಿರುವ ಹುನ್ನಾರಗಳನ್ನು ಉದಾಹರಣೆ ನೀಡುವುದರ ಮೂಲಕ ಅವರು ವಿವರಿಸಿದರು. ನಮ್ಮ ದೇಶ ಸಂಪೂರ್ಣ ಅಮೇರಿಕಾ ಸಾಮ್ರಾಜ್ಯಶಾಹಿಗಳಪರ ವಾಲುತ್ತಿದೆ. ಇದಕ್ಕೆ ಉದಾಹರಣೆಯಾಗಿ ಇಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತುತ್ತಿದ್ದು ಇದರ ಉದ್ದೇಶ ಅಮೇರಿಕಾ ಮುಂತಾದ ದೊಡ್ಡ ರಾಷ್ಟ್ರಗಳಲ್ಲಿನ ಕಂಪೆನಿಗಳಲ್ಲಿ ನಮ್ಮವರನ್ನು ದುಡಿಸಿಕೊಳ್ಳುವುದಕ್ಕಾಗಿದೆ ಎಂದು ನಾಯಕ್ ತಿಳಿಸಿದರು. ಭೋಪಾಲ್ ಅನಿಲ ದುರಂತ ಸಂಭವಿಸಿ 25 ವರ್ಷಗಳು ಕಳೆದರೂ ಆರೋಪಿಗಳಿಗೆ ಶಿಕ್ಷೆಯನ್ನು ಈಗ ಪ್ರಕಟಿಸುತ್ತಿರುವುದ ಶೊಚನೀಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ವಸಂತ ಆಚಾರಿ ಕಾರ್ಮಿಕ ನಾಯಕರು ಮತ್ತು ಬಿ.ಮಾಧವ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.