ಮಂಗಳೂರು : ದ.ಕ. ಕನ್ನಡ ಸಾಹಿತ್ಯ ಪರಿಷತ್ತ್ತು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಸರಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಫ್ರೌಢ ಶಾಲಾ ವಿಭಾಗ, ರಥಬೀದಿ, ಮಂಗಳೂರು ಇದರ ವತಿಯಿಂದ, ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಇಂದು ಬೆಳಗ್ಗೆ ರಥಬೀದಿ ಶಾಲಾ ಸಭಾಂಗಣದಲ್ಲಿ ಜರುಗಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಧ್ವಜಾರೋಹಣ ಮತ್ತು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಜೀವನದ ಬೀಭತ್ಸ ಕಲೆಯ ಒಟ್ಟು ವಾತಾವರಣದಲ್ಲಿ ನಾವೆಲ್ಲ ಇದ್ದೇವೋ, ಇಲ್ಲವೋ ಎಂದು ಭಾಸವಾಗುತ್ತಿದೆ, ನಮ್ಮ ಮನಸ್ಸನ್ನು ತೆರೆದಿಡಬೇಕು, ಚಿಂತನೆಯನ್ನು ಬಹುರಾಷ್ಟ್ರದ ವಿಧ್ಯಾಬ್ಯಾಸದ ಜೊತೆಗೆ ನಮ್ಮ ತನವನ್ನು ಬೆಳೆಸಬೇಕಿದೆ. ಪ್ರತಿಭೆಗಳು ಅರಳುವಾಗ ಇಂತಹ ವಾತಾವರಣದಲ್ಲಿ ಇದ್ದರೆ ನಮ್ಮಲ್ಲೂ ದ.ರಾ. ಬೇಂದ್ರೆಯಂತವರು ಹುಟ್ಟಬಹುದು.
ಲೋಕನಾಯಕನಾಗಬೇಕಾದರೆ ಕಲಿಯುವಂತ ವಾತಾವರಣದಲ್ಲಿ ಅದಕ್ಕೆ ಬೇಕಾದ ಅವಕಾಶಗಳಿರಬೇಕು. ಇಲ್ಲಿ ಆರಂಭವಾದ ಪ್ರಕ್ರಿಯೆ ಕನರ್ಾಟಕದಾದ್ಯಂತ ಅನುಸರಿಸಲಾಗುವುದು. ಶಿಕ್ಷಣ ರಂಗದಲ್ಲಿ ಬೇರೆ ಭಾಷೆಯನ್ನು ಕಲಿಯಬೇಕು. ಅದು ಅನಿವಾರ್ಯತೆ, ಆದರೆ ನಮ್ಮೊಳಗಿನ ಮನಸ್ಸು ಸಂಕುಚಿತವಾಗಬಾರದು, ವಿಕಾಸಿತವಾಗಬೇಕು. ಸಂಸ್ಕಾರ – ಸಂಸ್ಕೃತಿ ಇರುವಂತಹ ಮನುಷ್ಯನ ಬದುಕು ಸುಂದರವಾಗಬಹುದು. ಇತರ ಭಾಷೆ ದೂಷಿಸುವುದು ಸರ್ವತ ಸಲ್ಲ. ಆಯಾಯ ರಾಜ್ಯದಲ್ಲಿ ಬದುಕುತ್ತಿರುವವರು ಆವರವರ ರಾಜ್ಯದ ಭಾಷೆಯನ್ನು ಗೌರವಿಸುವುದು ಪ್ರಥಮ ಕರ್ತವ್ಯ. ಒಳ್ಳೆಯ ಕವಿತೆ ಬರೆಯಲು ನಮ್ಮ ಕವಿಗಳು ಮುಂದಾಗಬೇಕು. ದ.ರಾ. ಬೇಂದ್ರೆ, ಕುವೆಂಪು ಮುಂತಾದ ಸಾಧಕ ಬಂಧುಗಳ ಸಂದಾನವನ್ನು ಜನಸಮುದಾಯಕ್ಕೆ ತಿಳಿಸುತ್ತಾ ಕನ್ನಡ ಸಾಹಿತ್ಯ ಪರಿಷತ್ತ್ತು ಮುಂದಕ್ಕೆ ಸಾಗಬೇಕು ಎಂದು ಅವರು ತಿಳಿಸಿದರು.
ಶ್ರೀ. ಪಿ.ಪಿ. ಜೋಸೆಫ್ ಪ್ರಾಚಾರ್ಯರು, ಸ.ಪ.ಪೂ ಕಾಲೇಜು, ರಥಬೀದಿ ಮಂಗಳೂರು, ಡಾ| ಯು. ಮಹೇಶ್ವರಿ, ಶ್ರೀಮತಿ ಶೋಭಾ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೀಲಾವತಿ ಕೆ.ಕೆ. ಸ್ವಾಗತಿಸಿದರು.