ಬೆಂಗಳೂರು : ಭಾವಿಪತಿ ಬಿ.ವಿ.ಗಿರೀಶ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಪಡೆದಿದ್ದ ಸುಂದರ ಶುಭಾ, ಈಗ ತ್ವರಿತ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸ್ವತಃ ಸಿವಿಲ್ ವಕೀಲೆಯಾಗಿರುವ ಶುಭಾ ಅವರು ತಂದೆ ಶಂಕರ ನಾರಾಯಣ ಹಾಗೂ ತಮ್ಮ ವಕೀಲ ಸಿವಿ ನಾಗೇಶ್ ಅವರ ಮಾರ್ಗದರ್ಶನದಂತೆ 17ನೇ ತ್ವರಿತ ನ್ಯಾಯಲಯದ ನ್ಯಾಯಧೀಶ ಎಸ್ ಕೆ ವಂಟಿಗೋಡಿ ಅವರು ನೀಡಿದ ತೀರ್ಪನ್ನುಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ನಡೆದಿದ್ದ ಬಿ.ವಿ ಗಿರೀಶ್ (27)ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ,ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಭಾರತೀಯ ದಂಡ ಸಂಹಿತೆ 302,120 ಹಾಗೂ 201 ರ ಅನ್ವಯ ಜೀವಾವಧಿ ಶಿಕ್ಷೆ ಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಜು.14ರಂದು ಆದೇಶ ಹೊರಡಿಸಿತ್ತು.
ಶಿಕ್ಷೆ ಪ್ರಮಾಣ :ಅರುಣ ವರ್ಮಾಹಾಗೂ ದಿನೇಶ್ ಗೆ 50 ಸಾವಿರ ದಂಡ,ವೆಂಕಟೇಶ್ ಗೆ 1ಲಕ್ಷ ರು ದಂಡ, ಶುಭಾಳನ್ನು ನಾಲ್ಕನೆ ಅಪರಾಧಿ ಯಾಗಿ ಪರಿಗಣಿಸಿ 75 ಸಾವಿರ ರು ದಂಡ ವಿಧಿಸಲಾಗಿದೆ. ಶುಭಾಳಿಗೆ ಜೀವಾವಧಿ ಜೊತೆಗೆ ಹೆಚ್ಚುವರಿ 3 ವರ್ಷ ಶಿಕ್ಷೆ ನೀಡಲಾಗಿದೆ.
ಕೃಪೆ : ದಟ್ಸ್ ಕನ್ನಡ