ಮಂಗಳೂರು : ಎಂ.ಎಸ್ ಸತ್ಯು ಅವರ ಇಜ್ಜೋಡು ಚಲನಚಿತ್ರದ ಬಿಡುಗಡೆ ಸಮಾರಂಭ ಇಂದು ಮಂಗಳೂರಿನ ನ್ಯೂಚಿತ್ರ ಚಿತ್ರಮಂದಿರದಲ್ಲಿ ನಡೆಯಿತು.
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜ್ ನ ಪ್ರೊಫೆಸರ್ ಟಿ. ಎಸ್. ಶಿವಶಂಕರ್ ಮೂರ್ತಿ, ಇಂತಹ ಸಿನಿಮಾಗಳನ್ನು ವಿದ್ಯಾರ್ಥಿಗಳು, ಯುವ ಪೀಳಿಗೆಯು ಪ್ರೋತ್ಸಾಹಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳ್ಳೆಯ ಅಭಿರುಚಿ ಇರುವ ಸಿನಿಮಾ ಮೂಡಿ ಬರಲಿ, ಅಂತಃಕರಣದ ಭಾವನೆಗಳನ್ನು ಪರಿವರ್ತನೆ ಮೂಲಕ ಜನರಿಗೆ ತಿಳಿಸಿ ಜನರಲ್ಲಿ ಕ್ರಾಂತಿಯನ್ನುಂಟು ಮಾಡುವ ಕೆಲಸವನ್ನು ಎಂ.ಎಸ್ ಸತ್ಯು ಅವರು ಮಾಡಿದ್ದಾರೆ ಎಂದು ತಿಳಿಸಿದರು.
ಬಹಳ ವರ್ಷದ ನಂತರ ಸಿನಿಮಾ ಮಾಡಿದರೂ ವ್ಯಾಕರಣ ಮರೆಯದೆ ಮಾಡಿದಂತಹ ಚಿತ್ರ ಇಜ್ಜೋಡು. 20 ದಿನದಲ್ಲಿ ಹಾಸನದಲ್ಲಿ ರಚಿಸಿದಂತಹ ಸಿನಿಮಾ ಇದಾಗಿದ್ದು ಇದರಲ್ಲಿ ಹಾಡು, ನೃತ್ಯ, ನಾಟಕ ಕೂಡಾ ಇದೆ. ಇದೀಗ ಕನ್ನಡದಲ್ಲಿ ಕೆಟ್ಟ ಕೆಟ್ಟ ಸಿನಿಮಾ ಮಾಡುತ್ತಿದ್ದಾರೆ. ಅದು ನೋಡಲು ಅವಮಾನವಾಗುತ್ತಿದೆ. ಈ ಸಿನಿಮಾ ಸಮಸ್ಯೆಯನ್ನು ಎತ್ತಿ ಹಿಡಿಯುವ ಚಿತ್ರವಾಗಿದ್ದು, ಇದರಲ್ಲಿ ಮನರಂಜನೆಯೂ ಇದೆ, ಸಮಸ್ಯೆಯೂ ಇದೆ. ಎಂದು ಎಂ. ಎಸ್ ಸತ್ಯು ತಿಳಿಸಿದರು. ನಂತರ ಮಾಲಾಡಿ ಅಜಿತ್ ಕುಮಾರ್ ರೈಯವರು ಎಂ. ಎಸ್ ಸತ್ಯು, ಫಾರೂಕ್ ಶೇಖ್ ಅನಿರದ್ದ್ ಇವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಫಾರೂಕ್ ಶೇಕ್, ಭಾರತೀಯ ಚಿತ್ರರಂಗದ ಖ್ಯಾತ ನಟ ಫಾ| ಸ್ವೀಬರ್ಟ್ ಡಿ ಸಿಲ್ವಾ, ಪ್ರಾಂಶು ಪಾಲರು, ಸಂತ ಅಲೋಶಿಯಸ್ ಮಂಗಳೂರು, ಮಾಲಾಡಿ ಅಜಿತ್ ಕುಮಾರ್ ರೈ, ಶ್ರೀ ಎಮ್. ಜೆ. ಎಫ್. ಆಲ್ವಿನ್ ಪಾಟ್ರಿಕ್ ಪತ್ರವೋ. ಎಡ್ವಿನ್ ವಾಲ್ಟರ್ ಇವರುಗಳು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸುಧೀರ್ ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.