ಮಂಗಳೂರು : ಸುಜಲಾಂ, ಸುಫಲಾಂ… ಸಸ್ಯ ಶ್ಯಾಮಲಾಂ… ಎಂದು ಜೆಪಿಸುತ್ತಾ ಭಾರತ ದೇಶವನ್ನು ಹಸಿರು ಮಯ ಮಾಡೋಣ, ಆಹಾರದ ಸಮಸ್ಯೆಯನ್ನು ಬಗೆ ಹರಿಸೋಣ , ವಾತಾವರ್ಣ ಮಾಲಿನ್ಯವನ್ನು ನಿಮರ್ೂಲನೆ ಮಾಡೋಣ ಎನ್ನುವ ಮಹೋನ್ನತ , ಉದ್ದೇಶಗಳಿಂದ ಸೃಷ್ಟಿಯಾದ ಅಗ್ರಿಗೋಲ್ಡ್ ಫೌಂಡೇಶನ್ ಈದಿನ “ಅಗ್ರಿಗೋಲ್ಡ್ ಗ್ರೀನ್ ಇಂಡಿಯಾ” ಎಂಬ ಮಹಾಯಜ್ಞ ಪ್ರಾರಂಭಿಸಿ
ಕರ್ನಾಟಕ, ಮತ್ತು ಆಂದ್ರಪ್ರದೇಶ ರಾಜ್ಯಗಳಲ್ಲಿ ಈ ಮಾಹೆಯ 26,27 ಮತ್ತು 29 ದಿನಾಂಕಗಳಂದು ಸುಮಾರು 20,00000ಗಳ ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿವೆ.
ಇಂದಿನ ದಿನಗಳಲ್ಲಿ ಪ್ರಪಂಚಾದ್ಯಂತ D-FORESTRATION (ಕಾಡಿನ ಸಂಪತ್ತನ್ನು ಕ್ರೀಣಿಸುವುದು ) ಆಗುತ್ತಿರುವುದರಿಂದ ವಾತಾವರಣದಲ್ಲಿನ ಬದಾಲಾವಣೆ, ಸಕಾಲದಲ್ಲಿ ಮಳೆಯಾಗದೆ ಅಂತರ್ಜಲ ಕ್ಷೀಣಿಸುವುದು ಉಷ್ಣತೆಯಲ್ಲಿ ಬದಲಾವಣೆ, ಕೃಷಿ ಉತ್ಪನ್ನಗಳ ಇಳುವರಿ ಕಡಿಮೆ ಎನ್ನುವ ದುಷ್ಪರುಣಾಮಗಳನ್ನು ಕಾಣುತ್ತಿದ್ದೇವೆ ಆದ್ದರಿಂದ “ಅಗ್ರಿಗೋಲ್ಡ್ ಫೌಂಡೇಶನ್” 2010ರ ವರ್ಷವನ್ನು “ಅಗ್ರಿಗೋಲ್ಡ್ ಇಂಡಿಯಾ” ಎನ್ನುವ ಘೋಷಣೆಯೊಂದಿಗೆ ಸುಮಾರು 20,00000ಸಸ್ಯ ರಾಶಿಯನ್ನು ನೆಡುವ ಕಾರ್ಯಕ್ರಮವನ್ನು ಕೈಗೊಂಡಿದೆ.
ಅಗ್ರಿಗೋಲ್ಡ್ ಫೌಂಡೇಶನ್ ಕಳೆದ 10 ವರ್ಷಗಳಿಂದ ಅನೇಕ ಸಾಮಾಜಿಕ ಸೇವೆಗಳನ್ನು ನಿರ್ವಹಿಸುತ್ತಾ ಬಂದಿರುವುದು ನಿಮಗೆ ತಿಳಿದಿದೆ, ಪ್ರಕೃತಿ ವಿಕೋಪ ಸಂಭವಿಸಿದಾಗ ನಮ್ಮ ಈ ಗೌರವಾನ್ವಿತ ಸಂಸ್ಥೆ ರಕ್ತದಾನ ಶಿಬಿರ ಸಸಿ ನೆಡುವುದು ಮುಂತಾದ ಕಾರ್ಯಕ್ರಮಗಳ ಜೊತೆಗೆ ಪ್ರವಾಹ ಸಂಭವಿಸಿದಾಗ ಕನರ್ಾಟಕ ಮತ್ತು ಆಂದ್ರಪ್ರದೇಶಗಳಲ್ಲಿ ಪ್ರತ್ಯಕ್ಷವಾಗಿ ಸುಮಾರು 2 ಕೋಟಿ ಮೌಲ್ಯದ ಆಹಾರಾ ದಾನ್ಯಗಳನ್ನು, ಇತರೆ ವಸ್ತುಗಳನ್ನು ಮತ್ತು ವಸ್ತ್ರಗಳನ್ನು ನಮ್ಮ ಸಂಸ್ಥೆಯ ಫೌಂಡೇಶನ್ ಕಾರ್ಯಕರ್ತರ ಮೂಲಕ ಭೌಗೋಳಿಕ ವಿಪತ್ತು ಸಂಭವಿಸಿದ ಪ್ರಾಂತ್ಯಗಳಲ್ಲಿ ವಿತರಿಸಿ ಜನರ ಸಂಕಷ್ಟಗಳಲ್ಲಿ ಅಳಿಳು ಸೇವೆ ಸಲ್ಲಿಸಿದ್ದೇವೆ. ಇದಕ್ಕಾಗಿ ನಮಗೆ ಹೆಮ್ಮೆ ಇದೆ.ಇದಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈದ್ಯರ ಮೂಲಕ ವೈದ್ಯಸೇವೆಗಳನ್ನು ಹಾಗು ಪ್ರದಾನ ಮಂತ್ರಿ & ಮುಖ್ಯಮಂತ್ರಿರವರಿಗೆ
ಹಸ್ತಾಂತರಿಸಲಾಗಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಂಚುವುದು, ಕ್ರೀಡಾಶಕ್ತಿ ಆಟಗಾರರನ್ನು ಪ್ರೋತ್ಸಾಹಿಸುವುದು ಅನಾಥ ಆಶ್ರಮಗಳಿಗೆ ಬೇಕಾದ ಪದಾರ್ಥಗಳನ್ನು ಕಳುಹಿಸುವುದು ಮುಂತಾದ ಮಹೋನ್ನತ ಉದ್ದೇಶಗಳನ್ನು ಹೊಂದಿದ ಈ ಕಾರ್ಯಕ್ರಮಗಳನ್ನು ಇಲ್ಲಿಗೆ ನಿಲ್ಲಿಸದೆ ನಿಮ್ಮೆಲ್ಲರ ಸಹಾಯ ಸಹಕಾರಗಳಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯೊಂದಿಗೆ ಮುನ್ನಡೆಸುತ್ತೇವೆ ಎಂದು ವಿನಂಬ್ರತೆಯಿಂದ ಮನವಿ ಮಾಡುತ್ತಿದ್ದೇವೆ.
ಅಗ್ರಿಗೋಲ್ಡ್ ಗ್ರೂಪ್ ಮೂಲಕ. power project, food products, real estates & construction, infra &mining tourism, media (nadhi swarnavahini) export & ayurveda supper specialty hospital Agriculture, bio fertilizers diary products ರಂಗದಲ್ಲಿ ಅಗ್ರಿಗೋಲ್ಡ್ ಸಂಸ್ಥೆ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ, ವ್ಯಾಪಾರ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಸೇವೆ ನಿರ್ವಹಿಸುವ ಸದುದ್ದೇಶದಿಂದ “ಅಗ್ರಿಗೋಲ್ಡ್ ಫೌಂಡೇಶನ್” ಪ್ರಾರಂಭಿಸಿ ಸೇವೆಗಳನ್ನು ನೀಡುತ್ತಿದೆ.
ಆ ಪ್ರಯುಕ್ತ ತಾ 26-07-2010 ಸೋಮವಾರ ಬೆಳಿಗ್ಗೆ 10.30 ಕ್ಕೆ ಜ್ಯೋತಿ ವೃತ್ತದಿಂದ ಹೊರಟ ಬೃಹತ್ ಮರವಣಿಗೆಯು ಸಾಗಿ ಅಲ್ಲಿ ಉಚಿತ ಸಸಿ ವಿತರಣಾ ಕಾರ್ಯಕ್ರಮ ನೆರವೇರಿತ್ತು. ಸಮಾರಂಭದ ಅಧ್ಯಕ್ಷತೆ ಸ್ಥಾನವನ್ನು ಶ್ರೀಯುತ ಜಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ವಹಿಸಿದರು. ಅಗ್ರಿಗೋಲ್ಡ್ ಫೌಂಡೇಶನ್ ಹಿರಿಯ ಅಧಿಕಾರಿಗಳಾದ ಪ್ರಕಾಶ್ ಎಸ್ ದೇವಾಡಿಗ, ಲೀಲಾದರ್ ಬಿ ದೇವಾಡಿಗ ಸುಮತಿ ಎಸ್ ಹೆಗ್ಡೆ, ಮೋಹನ್ ಭಟ್ ರೇಣುಕಾ ಬಿ ಅತಿಥಿಗಳಾಗಿ ಹಾಜರಿದ್ದರು. ರಾಘವೇಂದ್ರ ಕುಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು.