ಮಂಗಳೂರು : ಸೆಂಟರ್ ಆಫ್ ಇಂಡಿಯನ್ ಫ್ರೆಡ್ ಯೂನಿಯನ್ಸ್ ದ.ಕ.ಜಿಲ್ಲಾ ವತಿಯಿಂದ ಅಂತರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ದುಡಿಯುವ ಮಹಿಳೆಯರ ಸಮಾವೇಶವು ಇಂದು ಬೆಳಗ್ಗೆ ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್.ಕೆ.ಗೀತಾ, ಸಿ.ಐ.ಟಿ.ಯು ದುಡಿಯುವ ಮಹಿಳೆಯರ ಹೋರಾಟ ಸಮಿತಿ ಸಂಚಾಲಕಿ, ಹೊರಗೆ ದುಡಿಯುವ ಹೆಣ್ಣುಮಕ್ಕಳ ಮೇಲಾಗುವ ಶೋಷಣೆ, ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿದರು. ಭಾರತ ಇಡೀ ಪ್ರಪಂಚದಲ್ಲಿ ಆರ್ಥಿಕ ಶಕ್ತಿ ಎಂಬ ಹೆಸರು ಪಡೆದಿದೆ. ಭಾರತದಲ್ಲಿ ತಯಾರಿಸಿದ ಉತ್ಪನ್ನವನ್ನು ರಫ್ತು ಮಾಡುವುದರ ಮೂಲಕ ವಿದೇಶಿ ಹಣ ಪಡೆಯುತ್ತದೆ ಎಂದು ಸರಕಾರ ಹೇಳುತ್ತದೆ. ಆದರೆ ಮಹಿಳೆಯ ಶ್ರಮವನ್ನು ಸರಕಾರ ಗಮನಿಸುತ್ತಿಲ್ಲ, ಬೆಲೆ ಏರಿಕೆ ಮನೆ ನಡೆಸುವ ಮಹಿಳೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದರು. ದೇಶಕ್ಕೆ ಮುಂದಿನ ಜನಾಂಗ ಆರೋಗ್ಯವಾಗಿರಬೇಕಾದರೆ ಮಹಿಳೆಗೆ ಆಹಾರ ಸಿಗಬೇಕು, ಮಗುವನ್ನು ಹೆತ್ತು, ಹೊರುವವಳು ಮಹಿಳೆ ಆದುದರಿಂದ ಮಹಿಳೆಗೆ ಅವಶ್ಯಕವಾದಷ್ಟು ಆಹಾರ ಸಿಗಬೇಕು ಇದಕ್ಕಾಗಿ ನಿರಂತರ ಹೋರಾಟ ನಡೆಸಬೇಕು ಎಲ್ಲರೂ ಒಗ್ಗಟ್ಟಿಗೆ ಹೋರಾಡಬೇಕು ಎಂದು ಅವರು ತಿಳಿಸಿದರು.
ದುಡಿಯುವ ಮಹಿಳೆಯರ ಮಧ್ಯದಲ್ಲಿ ನಾಯಕತ್ವವನ್ನು ಬೆಳೆಸಬೇಕು. ದುಡಿಯುವ ಮಹಿಳೆಯರ ಸಮಿತಿಯು ಸಿ.ಐ.ಟಿ.ಯು ನ ಒಳಗಡೆ ಇರುವ ಒಂದು ಭಾಗವಾಗಿದೆ. ಕಾರ್ಮಿಕರು ಬೇಡಿಕೆಗಾಗಿ ಅನೇಕ ಹೋರಾಟ ಮಾಡುತ್ತಾರೆ. ಇದರಲ್ಲಿ ಆರ್ಥಿಕ ಬೇಡಿಕೆ ಹಾಗೂ ಇತರ ಸವಲತ್ತುಗಳಿಗೆ ಸಂಬಂಧ ಪಟ್ಟಿರುತ್ತದೆ. ಸಮಾನ ದುಡಿಮೆ ಸಮಾನ ಕೂಲಿ ಎಂಬ ಕಾನೂನು ಇದ್ದರೂ ಜಾರಿಗೆ ಬಂದಿಲ್ಲ. ಮಹಿಳೆಯರಿಗೆ 33% ಮೀಸಲಾತಿ ಇರಬೇಕು ಎಂದು ಸಿ.ಟಿ.ಐ.ಯು ನ ಉಪ ಕಾರ್ಯದರ್ಶಿಯಾದ ಬಿ. ಮಾದವರವರು ತಿಳಿಸಿದರು.
ಸಿ.ಐ.ಟಿ.ಯು ಅಧ್ಯಕ್ಷರಾದ ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ ಬೀಡಿ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷೆಯಾದ ರಮಣಿ, ಅಂಗನವಾಡಿ ಜಿಲ್ಲಾ ಉಪಾಧ್ಯಕ್ಷೆ ಸುಕನ್ಯ, ಅಕ್ಷರದಾಸೋಹ ಜಿಲ್ಲಾ ಉಪಾಧ್ಯಕ್ಷೆಯಾದ ಗಿರಿಜ, ಬೀಡಿ ಕಾರ್ಮಿಕರ ಒಕ್ಕೂಟ ಸದಸ್ಯರಾದ ಜಯಂತ ಶೆಟ್ಟಿ, ವಿಮಲ, ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ್ ಉಪಸ್ಥಿತರಿದ್ದರು